ನಂಬಿಕೆ (ನಾಲ್ಕು ಸಾಲುಗಳಲ್ಲಿ )
ನಂಬಿಕೆ ಇರುವುದು ಕಣ್ಣಲ್ಲಿ; ಇಂದು ಕಣ್ಮುಚ್ಚಿ ಮಲಗಿದ್ದರೂ, ನಾಳೆ ಕಣ್ತೆರೆದು ನೋಡುವುದೆಂದು..
ನಂಬಿಕೆ ಇರುವುದು ಕಿವಿಯಲ್ಲಿ, ಇಂದು ಸವಿದನಿಯ ಕೇಳದಿದ್ದರೂ, ನಾಳೆ ಕಿವಿಗೊಟ್ಟು ಆಲಿಸುವುದೆಂದು..
ನಂಬಿಕೆ ಇರುವುದು ಮನದಲ್ಲಿ; ಇಂದು ಮನ ಸೆರೆಯಲ್ಲಿ ಸಿಲುಕಿದ್ದರೂ, ನಾಳೆ ಮನಸಾರೆ ಮುನ್ನಡೆಯುವುದೆಂದು..
ನಂಬಿಕೆ ಇರುವುದು ನನ್ನಲ್ಲಿ; ಇಂದು ಸೋಲಿನ ನೋವಲ್ಲಿ ಕುಗ್ಗಿದ್ದರೂ, ನಾಳೆ ಗೆಲುವಿನ ನಲಿವಿಂದ ಹಿಗ್ಗುವೆನೆಂದು..
No comments:
Post a Comment