ಅದೆಷ್ಟೋ ಬಾರಿ ನಾನು ಸಾಂಗು ಹಾಡಿದೆ,
ಅದೆಷ್ಟೋ ಬಾರಿ ನಾನು ಸ್ಟೋರಿ ಹೇಳಿದೆ,
ಅದೆಷ್ಟೋ ಬಾರಿ ನಾನು ತುಂಬ ಓದಿದೆ,
ಅದೆಷ್ಟೋ ಬಾರಿ ನಾನು ಊರು ಸುತ್ತಿದೆ,
ಇಷ್ಟ ಪಟ್ಟರೂ, ಟ್ಯೂನು ಮಿಸ್ಸು ಹೊಡಿತಿದೆ,
ಕುಯ್ದೆ ಇದ್ದರೂ, ಸ್ಟೋರಿ ಬೋರು ಹೊಡೆಸಿದೆ,
ಓದಿದಾಗ ಯಾಕೋ ಪೇಪರ್ ಲೀಕ್ ಆಗಿದೆ,
ಲಾಂಗ್ ಡ್ರೈವಿನಲ್ಲಿ ಗಾಡಿ ಪಂಚರ್ ಆಗಿದೆ.
ಕಳ್-ನನ್-ಮಕ್ಳು, ಲೈಫ್-ಗೆ ಬತ್ತಿ ಇಟ್ಟಹಾಗಿದೆ..
ಯಾರೋ ಕಳ್-ನನ್-ಮಕ್ಳು.. ನನ್ ಲೈಫ್-ಗೆ ಬತ್ತಿ..
ಇಟ್ಟಹಾಗಿದೆ, ಬತ್ತಿ ಇಟ್ಟಹಾಗಿದೆ..
ಹಾಗೆ ಹೀಗೆ ಹೇಗೋ ಕಾಲೇಜ್ ಬಂಕು ಮಾಡಿದೆ,
ಕ್ಲಾಸು ಬಿಟ್ಟು ಮಾಸ್ಸು ಪಿಚ್ಚರ್ರ್ ನೋಡಲ್-ಹೊರಟಿದೆ,
ಹತ್ರ ಇದ್ದ ಥಿಯೇಟರ್-ಗೆ ಕದ್ದು ಓಡಿದೆ,
ಬ್ಲಾಕ್ ಟಿಕೆಟ್ ಇಂದ ಬಾಲ್ಕನಿಯ ಹತ್ತಿದೆ,
ಇಂಟರ್ವಲ್ಲಿಗೆ, ಕರೆಂಟ್ ಮಾಯವಾಯಿತೇ,
ಜೆನರೇಟರ್ ಇಲ್ದೆ ಸಿನಿಮಾ ನಿಂತುಹೊಯಿತೇ,
ಕಾಸು ಖಾಲಿಯಾಗಿ ಊಟ ಮಿಸ್ಸು ಆಯಿತೇ,
ಚೈನು ಮುರಿದ ಸೈಕಲ್ ತಳ್ಳೋ ಸೀನು ಬಂದಿತೇ.
ಕಳ್-ನನ್-ಮಕ್ಳು, ಲೈಫ್-ಗೆ ಬತ್ತಿ ಇಟ್ಟಹಾಗಿದೆ..
ಯಾರೋ ಕಳ್-ನನ್-ಮಕ್ಳು.. ನನ್ ಲೈಫ್-ಗೆ ಬತ್ತಿ..
ಇಟ್ಟಹಾಗಿದೆ, ಬತ್ತಿ ಇಟ್ಟಹಾಗಿದೆ..
ಅಂತು ಇಂತು ಓದು ಮುಗಿಸಿ ಕೆಲಸ ಸೇರಿದೆ,
ಹೊಸ ಡ್ರೆಸ್ಸು, ಹೊಸ ಬ್ಯೆಕು, ಹೊಸ ಲುಕ್ ಇದೆ,
ಡೀಸೆಂಟ್ ಆಗಿ, ಸೈಲೆಂಟ್ ಆಗಿ, ಲೈಫು ಸಾಗಿದೆ,
ಫಸ್ಟ್-ಸೈಟಿನಲ್ ಲೋವ್ವಾಗೋ ಚಾನ್ಸು ಬರುವುದೇ?
ಆಫೀಸ್ ಬಾಸಿಗೆ, ಪಿತ್ತ ನೆತ್ತಿಗೇರಿತೇ,
ಹಗಲು ರಾತ್ರಿ ದುಡಿದು ನನ್ನ ತಲೆಯು ಕೆಟ್ಟಿತೇ,
ವಾರೆಂಟ್ ಇಲ್ಲದೇ ಟಾಲೆಂಟ್ ಅರ್ರೆಸ್ಟ್ ಆಯಿತೇ,
ಚಿಕ್ಕ ಪುಟ್ಟ ಕನಸುಗಳು ಅಳಿಸಿ ಹೋಯಿತೇ,
ಕಳ್-ನನ್-ಮಕ್ಳು, ಲೈಫ್-ಗೆ ಬತ್ತಿ ಇಟ್ಟಹಾಗಿದೆ..
ಯಾರೋ ಕಳ್-ನನ್-ಮಕ್ಳು.. ನನ್ ಲೈಫ್-ಗೆ ಬತ್ತಿ..
ಇಟ್ಟಹಾಗಿದೆ, ಬತ್ತಿ ಇಟ್ಟಹಾಗಿದೆ..
ಅದೆಷ್ಟೋ ಬಾರಿ ನಾನು ಸಾಂಗು ಹಾಡಿದೆ,
ಅದೆಷ್ಟೋ ಬಾರಿ ನಾನು ಸ್ಟೋರಿ ಹೇಳಿದೆ,
ಅದೆಷ್ಟೋ ಬಾರಿ ನಾನು ತುಂಬ ಓದಿದೆ,
ಅದೆಷ್ಟೋ ಬಾರಿ ನಾನು ಊರು ಸುತ್ತಿದೆ,
ಇಷ್ಟ ಪಟ್ಟರೂ, ಟ್ಯೂನು ಮಿಸ್ಸು ಹೊಡಿತಿದೆ,
ಕುಯ್ದೆ ಇದ್ದರೂ, ಸ್ಟೋರಿ ಬೋರು ಹೊಡೆಸಿದೆ,
ಓದಿದಾಗ ಯಾಕೋ ಪೇಪರ್ ಲೀಕ್ ಆಗಿದೆ,
ಲಾಂಗ್ ಡ್ರೈವಿನಲ್ಲಿ ಗಾಡಿ ಪಂಚರ್ ಆಗಿದೆ.
ಕಳ್-ನನ್-ಮಕ್ಳು, ಲೈಫ್-ಗೆ ಬತ್ತಿ ಇಟ್ಟಹಾಗಿದೆ..
ಯಾರೋ ಕಳ್-ನನ್-ಮಕ್ಳು.. ನನ್ ಲೈಫ್-ಗೆ ಬತ್ತಿ..
ಇಟ್ಟಹಾಗಿದೆ, ಬತ್ತಿ ಇಟ್ಟಹಾಗಿದೆ..
Monday, June 27, 2011
Wednesday, April 13, 2011
ಹೊಸ ಹುರುಪು
ನಿನ್ನ ದೇಶವೇ ನಿನ್ನ ಉಸಿರು,
ಅಮರವಾಗಲಿ ನಿನ್ನ ದೇಶದ ಹೆಸರು,
ನಿನ್ನ ಖಾಸಗಿ ಚಿಂತೆಯ ಬಿಟ್ಟು,
ಸದ್ಭಾವದಲಿ ನಿನ್ನ ದೇಶವ ಕಟ್ಟು..
ನಿನ್ನ ಕೋಣೆಯ ಹಳೆ ಕನ್ನಡಿ,
ತೋರುವುದು ನಿನ್ನದೇ ಪ್ರತಿಬಿಂಬ,
ಬರಿಗಣ್ಣಿಗೆ ನಿನ್ನ ಬರಿಗಣ್ಣಿಗೆ..
ನಿನ್ನ ಮನದ ನಿಲುವುಗನ್ನಡಿ
ಬೀರುವುದು ಸಮಾಜದ ಬಿಂಬ,
ಒಳಗಣ್ಣಿಗೆ ನಿನ್ನ ಒಳಗಣ್ಣಿಗೆ..
ನಿನ್ನ ಸಮಾಜದ ತೊಡಕುಗಳ,
ಬರಿ ಮಾತಲಿ ನೀ ದೋಷಿಸಿ,
ಮಲಗಿದರೆ ನೀನು, ಮಲಗಿದರೆ ನೀನು..
ಆ ತೊಡಕಿನ ಕೇಂದ್ರಬಿಂದು,
ಬ್ರಷ್ಟಾಚಾರದ ಭೂತವಿಂದು,
ಬಿಡುವುದೇನು ನಿನ್ನ ಬಿಡುವುದೇನು..
ನಿನ್ನ ನಿದಿರಿಂದ ಎಚ್ಚೆದ್ದು,
ಈ ತೊಡಕುಗಳ ನೀ ತುಳಿದರೆ,
ಬೆಳವಣಿಗೆ ನಿಜ ಬೆಳವಣಿಗೆ..
ನಿನ್ನ ಗುರುತು ಈ ಸಮಾಜ,
ಆಗಬಾರದೇ ನೀ ಸತ್ಪ್ರಜ,
ಈ ದೇಶಕೆ ಈ ದೇಶಕೆ..
ನಿನ್ನ ದೇಶವೇ ನಿನ್ನ ಉಸಿರು,
ಅಮರವಾಗಲಿ ನಿನ್ನ ದೇಶದ ಹೆಸರು,
ನಿನ್ನ ಖಾಸಗಿ ಚಿಂತೆಯ ಬಿಟ್ಟು,
ಸದ್ಭಾವದಲಿ ನಿನ್ನ ದೇಶವ ಕಟ್ಟು..
ಅಮರವಾಗಲಿ ನಿನ್ನ ದೇಶದ ಹೆಸರು,
ನಿನ್ನ ಖಾಸಗಿ ಚಿಂತೆಯ ಬಿಟ್ಟು,
ಸದ್ಭಾವದಲಿ ನಿನ್ನ ದೇಶವ ಕಟ್ಟು..
ನಿನ್ನ ಕೋಣೆಯ ಹಳೆ ಕನ್ನಡಿ,
ತೋರುವುದು ನಿನ್ನದೇ ಪ್ರತಿಬಿಂಬ,
ಬರಿಗಣ್ಣಿಗೆ ನಿನ್ನ ಬರಿಗಣ್ಣಿಗೆ..
ನಿನ್ನ ಮನದ ನಿಲುವುಗನ್ನಡಿ
ಬೀರುವುದು ಸಮಾಜದ ಬಿಂಬ,
ಒಳಗಣ್ಣಿಗೆ ನಿನ್ನ ಒಳಗಣ್ಣಿಗೆ..
ನಿನ್ನ ಸಮಾಜದ ತೊಡಕುಗಳ,
ಬರಿ ಮಾತಲಿ ನೀ ದೋಷಿಸಿ,
ಮಲಗಿದರೆ ನೀನು, ಮಲಗಿದರೆ ನೀನು..
ಆ ತೊಡಕಿನ ಕೇಂದ್ರಬಿಂದು,
ಬ್ರಷ್ಟಾಚಾರದ ಭೂತವಿಂದು,
ಬಿಡುವುದೇನು ನಿನ್ನ ಬಿಡುವುದೇನು..
ನಿನ್ನ ನಿದಿರಿಂದ ಎಚ್ಚೆದ್ದು,
ಈ ತೊಡಕುಗಳ ನೀ ತುಳಿದರೆ,
ಬೆಳವಣಿಗೆ ನಿಜ ಬೆಳವಣಿಗೆ..
ನಿನ್ನ ಗುರುತು ಈ ಸಮಾಜ,
ಆಗಬಾರದೇ ನೀ ಸತ್ಪ್ರಜ,
ಈ ದೇಶಕೆ ಈ ದೇಶಕೆ..
ನಿನ್ನ ದೇಶವೇ ನಿನ್ನ ಉಸಿರು,
ಅಮರವಾಗಲಿ ನಿನ್ನ ದೇಶದ ಹೆಸರು,
ನಿನ್ನ ಖಾಸಗಿ ಚಿಂತೆಯ ಬಿಟ್ಟು,
ಸದ್ಭಾವದಲಿ ನಿನ್ನ ದೇಶವ ಕಟ್ಟು..
Subscribe to:
Posts (Atom)