ಕತ್ತಲು ನುಂಗಿದ ಬೆಳಕು ನೀನೇನಾ,
ಬೆಳಕು ಚೆಲ್ಲಿದ ರಂಗು ನೀನೇನಾ,
ರಂಗು ಹರಡಿದ ಸೊಬಗು ನೀನೇನಾ,
ಸೊಬಗು ತುಂಬಿದ ಬೆರಗು ನೀನೇನಾ,
ನೀನೇನಾ, ನೀನೇನಾ..
ತಂಗಾಳಿ ಅಲೆಯಲ್ಲು ನಿನ್ನದೇ ಚಲನ,
ಚಂದಿರ ತಾರೆಯಲು ನಿನ್ನದೇ ನಯನ,
ನಿನ್ನ ನೆನೆದ ಆ ಮನ ಪರಮಪಾವನ,
ನನ್ನ ಸ್ವಪ್ನ ಸ್ಪಂದನ ಜೀವನಯಾನ,
ನೀನೇನಾ, ನೀನೇನಾ..
ನೀ ಕಾಣದ ಆ ಕ್ಷಣ ಯುಗಕೆ ಸಮಾನ,
ನೀ ನುಡಿಯದ ಆ ದಿನ ಬದುಕೇ ಮೌನ,
ನಾ ಧ್ಯಾನದಿ ಜಪಿಸುವ ಹೆಸರು ನೀನೇನಾ,
ನನ್ನ ಪ್ರಾಣದಿ ಬೆರೆತಿಹ ಉಸಿರು ನೀನೇನಾ..
ನೀನೇನಾ, ನೀನೇನಾ..
ಕತ್ತಲು ನುಂಗಿದ ಬೆಳಕು ನೀನೇನಾ,
ಬೆಳಕು ಚೆಲ್ಲಿದ ರಂಗು ನೀನೇನಾ,
ರಂಗು ಹರಡಿದ ಸೊಬಗು ನೀನೇನಾ,
ಸೊಬಗು ತುಂಬಿದ ಬೆರಗು ನೀನೇನಾ,
ನೀನೇನಾ, ನೀನೇನಾ..